ಸದಸ್ಯರಿಗೆ ಸ್ಥಿರಾಸ್ತಿಯ ಮೇಲೆ ಅಡಮಾನ ಸಾಲ:

ಸಂಘವು ತನ್ನ ಸದಸ್ಯರಿಗೆ ಅವರ ಸ್ಥಿರಾಸ್ತಿ ಅಡಮಾನ ಮಾಡಿಕೊಂಡು ಸಾಲ ರೂ. 6 ಲಕ್ಷ ವರೆಗೆ ಸದ್ಯ ವಾರ್ಷಿಕ ಶೇ. 8 ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಈ ಸಾಲ ಪಡೆಯಲು ಇಚ್ಛಿಸುವ ಸದಸ್ಯರು ತಮ್ಮ ಸ್ಥಿರಾಸ್ತಿಗೆ ಸಂಬಂಧಿಸಿದ ಮೂಲ ಕಾಗದ ಪತ್ರಗಳನ್ನು ಸಂಘಕ್ಕೆ ಸಲ್ಲಿಸಬೇಕಾಗಿರುತ್ತದೆ. ಸಂಘವು ಸದರಿ ಆಸ್ತಿ ಕಾಗದ ಪತ್ರಗಳನ್ನು ಕಾನೂನು ಸಲಹೆಗಾರರಿಗೆ ಪರಿಶೀಲನೆಗಾಗಿ ಕಳುಹಿಸಲಾಗುವುದು. ಕಾನೂನು ಸಲಹೆಗಾರರು ಈ ಕಾಗದ ಪತ್ರಗಳನ್ನು ಪರಿಶೀಲಿಸಿ ಪೂರಕ ವರದಿ ನೀಡಿದಲ್ಲಿ ಕಾರ್ಯಕಾರಿ ಮಂಡಳಿಯು ಸೂಕ್ತ ತೀರ್ಮಾನ ತೆಗೆದುಕೊಂಡು ಅಡಮಾನ ಸಾಲ ನೀಡುವುದು. ಸದಸ್ಯರು ಕಾನೂನು ಸಲಹೆಗಾರರ ಸೇವಾ ಶುಲ್ಕವನ್ನು ಭರಿಸಬೇಕಾಗಿರುತ್ತದೆ.



ಸದಸ್ಯರಿಗೆ ಜಾಮೀನು ಸಾಲ:

ಸಂಘವು ತನ್ನ ಸದಸ್ಯರಿಗೆ ಜಾಮೀನು ಸಾಲ ಗರಿಷ್ಠ ರೂ. 5 ಲಕ್ಷದ ವರೆಗೆ ಸದ್ಯ ವಾರ್ಷಿಕ ಶೇ. 9 ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಸದರಿ ಸಾಲಕ್ಕೆ ಜಾಮೀನು ನೀಡುವ ಸದಸ್ಯರೂ ಕೂಡ ಸಾಲಗಾರ ಸದಸ್ಯರಷ್ಟೇ ಹೊಣೆ / ಜವಾಬ್ದಾರರಾಗಿರುತ್ತಾರೆ.