ಸಮುದಾಯ ಭವನ

ನಮ್ಮ ಸಂಘದ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಿರ್ಮಾಣಗೊಂಡಿರುವ "ಜ್ಞಾನಭಾರತಿ ಸಮುದಾಯ ಭವನ" ವು, ನಮ್ಮ ಮೆಟ್ರೋ ಜ್ಞಾನಭಾರತಿ ಹಾಗೂ ಕೆಂಗೇರಿ ರೈಲ್ವೆ ನಿಲ್ದಾಣಗಳ ಸಮೀಪದಲ್ಲಿರುತ್ತದೆ. ಈ ಸುಸಜ್ಜಿತ ಸಮುದಾಯ ಭವನದಲ್ಲಿ 500 ಆಸನಗಳ ಸಾಮರ್ಥ್ಯವುಳ್ಳ ಮ್ಯಾರೇಜ್ ಹಾಲ್ ಹಾಗೂ ಒಮ್ಮೆಗೆ 300 ಜನ ಕುಳಿತು ಊಟ ಮಾಡಲು ಸಾಮರ್ಥ್ಯವುಳ್ಳ ಡೈನಿಂಗ್ ಹಾಲ್ ಒಳಗೊಂಡಿರುತ್ತದೆ.

ಆಧುನಿಕ ಸಲಕರಣೆ ಹಾಗು ಸವಲತ್ತುಗಳುಳ್ಳ ಅಡುಗೆ ಮನೆ ಮತ್ತು ಸುಮಾರು 1500 ಜನರಿಗೆ ಅಡುಗೆ ತಯಾರಿಸಲು ಬೇಕಾಗುವಷ್ಟು ಪಾತ್ರೆ ಸಾಮಾನುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಅಟ್ಯಾಚ್ಡ್ ಬಾತ್ ರೂಮ್ ಹಾಗೂ ಸ್ನಾನಕ್ಕೆ 24 ಗಂಟೆಗಳ ಬಿಸಿ ನೀರಿನ ವ್ಯವಸ್ಥೆ ಹೊಂದಿರುವ 10 ಕೊಠಡಿಗಳು ಇರುತ್ತವೆ. ಕಾರ್ಯಕ್ರಮದಾರರ ಸುರಕ್ಷತೆಗಾಗಿ 24/7 ಸಿ.ಸಿ.ಟಿ.ವಿ. ಕಣ್ಗಾವಲು ಮತ್ತು ನುರಿತ ಭದ್ರತಾ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದಾರರ ವಾಹನಗಳ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿರುತ್ತದೆ.

ಈ ಮೇಲಿನ ಎಲ್ಲಾ ಸೌಲಭ್ಯಗಳನ್ನುಳ್ಳ ಈ ಭವನದಲ್ಲಿ ಕಾರ್ಯಕ್ರಮದಾರರು ಆರತಕ್ಷತೆ, ಮದುವೆ, ನಾಮಕರಣ, ಸೀಮಂತ, ನಿಶ್ಚಿತಾರ್ಥ, ಹುಟ್ಟುಹಬ್ಬ ಹಾಗೂ ಇತರೆ ಶುಭ ಸಮಾರಂಭಗಳನ್ನು ಏರ್ಪಡಿಸಲು ಅತ್ಯಂತ ಪ್ರಶಕ್ತವಾಗಿರುತ್ತದೆ.

ಸಮುದಾಯ ಭವನದ ಬಾಡಿಗೆ ದರದ ವಿವರಗಳು ಈ ಕೆಳಕಂಡಂತಿರುತ್ತವೆ :

ಬಾಡಿಗೆ ದರ (23 ಗಂಟೆಗಳಿಗೆ): ಚೆಕ್-ಇನ್ ಮತ್ತು ಚೆಕ್-ಔಟ್ ಸಮಯ: 3 PM to 2 PM

ಸದಸ್ಯರಿಗೆ : ರೂ. 30,000/- + ಜಿ.ಎಸ್.ಟಿ @18%

ಸಾರ್ವಜನಿಕರಿಗೆ : ರೂ. 1,50,000/- + ಜಿ.ಎಸ್.ಟಿ @18%

ಬಾಡಿಗೆ ದರ (11 ಗಂಟೆಗಳಿಗೆ): ಚೆಕ್-ಇನ್ ಮತ್ತು ಚೆಕ್-ಔಟ್ ಸಮಯ: 11 AM to 10 PM

ಸದಸ್ಯರಿಗೆ : ರೂ. 15,000/- + ಜಿ.ಎಸ್.ಟಿ @18%

ಸಾರ್ವಜನಿಕರಿಗೆ : ರೂ. 75,000/- + ಜಿ.ಎಸ್.ಟಿ @18%




ಸಮುದಾಯ ಭವನದ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಕಾರ್ಯದರ್ಶಿ

ಕಛೇರಿ ದೂರವಾಣಿ ಸಂಖ್ಯೆ : 080- 23392405

Mobile No. : +91 9739946432