ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಯೋಜನೆ:

ಈ ಯೋಜನೆಯಲ್ಲಿ ಸಂಘವು ಸದಸ್ಯರುಗಳ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ವಾರ್ಷಿಕ ಮಹಾಸಭೆಯಲ್ಲಿ ಗೌರವಿಸಲಾಗುತ್ತಿದೆ. ಈ ಪುರಸ್ಕಾರಕೆ ಕಾರ್ಯಕಾರಿ ಮಂಡಳಿಯು ಕಾಲ ಕಾಲಕ್ಕೆ ನಿಗಧಿಗೊಳಿಸುವ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ. 60 ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕಾಗಿರುತ್ತದೆ. ಪ್ರಸ್ತುತ ಪ್ರತಿಭಾ ಪುರಸ್ಕಾರಕ್ಕೇ SSLC , II PUC, I.T.I. ಮತ್ತು ಡಿಪ್ಲೋಮ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಮಕ್ಕಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ಈ ಪುರಸ್ಕಾರಕ್ಕೆ ಸದಸ್ಯರುಗಳ ಅರ್ಥಿಕ ವರಮಾನ ಅಥವಾ ಜಾತಿಗಳ ಆಧಾರದ ಮೇಲೆ ವರ್ಗಿಕರಿಸದೆ ಎಲ್ಲ ಸದಸ್ಯರನ್ನು ಸಮಾನರಂತೆ ಪರಿಗಣಿಸಿ ನಿರ್ದೇಶಕ ಮಂಡಳಿಯು ಕಾಲ ಕಾಲಕ್ಕೆ ನಿಗದಿಗೊಳಿಸಿದಂತೆ ಮಾತ್ರ ಅರ್ಜಿ ನಮೂನೆಗಳನ್ನು ಸ್ವೀಕರಿಸಲಾಗುವುದು. ಪುರಸ್ಕಾರಕ್ಕಾಗಿ ಬಂದ ಅರ್ಜಿಗಳ ಪರಿಶೀಲನೆ ಹಾಗೂ ಆಯ್ಕೆಗಳು ನಿರ್ದೇಶಕ ಮಂಡಳಿಯದ್ದೇ ಅಂತಿಮವಾಗಿರುತ್ತದೆ. ಪುರಷ್ಕೃತರಾದ ಫಲಾನುಭವಿಗಳೇ ಖುದ್ದಾಗಿ ಗೌರವವನ್ನು ಸ್ವೀಕರಿಸ ಬೇಕಾಗಿರುತ್ತದೆ. ಈ ಬಗ್ಗೆ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೂ ಮುಂಚಿತವಾಗಿ ಅರ್ಜಿಗಳನ್ನು ಪಡೆಯುವ ಸಲುವಾಗಿ ಸಂಘವು ಸುತ್ತೋಲೆಯನ್ನು ಹೊರಡಿಸಿ ಎಲ್ಲಾ ಸದಸ್ಯರಿಗೂ ಮಾಹಿತಿಯನ್ನು ನೀಡಲಾಗುತ್ತದೆ. ಈ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಯಸುವ ಸದಸ್ಯರು ಒಂದು ವರ್ಷಕ್ಕೂ ಮೊದಲೇ ಸಂಘದ ಸದಸ್ಯತ್ವವನ್ನು ಪಡೆದಿರಬೇಕಾಗಿರುತ್ತದೆ

ಪ್ರತಿಭಾ ಪುರಸ್ಕಾರ ಯೋಜನೆಗೆ ಸದಸ್ಯರಿಂದ ಮತ್ತು ಇತರ ಮೂಲಗಳಿಂದಲೂ ನಿಧಿ ಸಂಗ್ರಹಿಸುವ ಅಧಿಕಾರವನ್ನು ಕಾರ್ಯಕಾರಿ ಮಂಡಳಿಯು ಹೊಂದಿರುತ್ತದೆ. ಈ ಯೋಜನೆಯನ್ನು ಪ್ರೋತ್ಸಾಹಿಸಲು ದಾನಿಗಳು ಧನ ಸಹಾಯ ನೀಡಿ ಸಂಘದಿಂದ ಅಧಿಕೃತ ರಶೀದಿಯನ್ನು ಪಡೆಯಬಹುದಾಗಿರುತ್ತದೆ.



ಸದಸ್ಯರ ಮರಣೋತ್ತರ ಪರಿಹಾರ ಯೋಜನೆ:

ಈ ಯೋಜನೆಯು ಸಂಘದಲ್ಲಿ ಈಗಾಗಲೇ ಅನುಷ್ಠಾನದಲ್ಲಿದ್ದು, ಸದಸ್ಯರು ಸಂಘಕ್ಕೇ ಸೂಚಿಸಿರುವ ನಾಮಿನಿಗೆ ಅವರ ಕಾಲಾ ನಂತರ ರೂ. 5,000-00 ಗಳ ಪರಿಹಾರ ಧನ ನೀಡಲಾಗುತ್ತಿದೆ.