ಸಂಘದ ಇತಿಹಾಸ

ನಮ್ಮ ಬೆಂಗಳೂರು ವಿಶ್ವವಿದ್ಯಾಲಯ ನೌಕರರ ಸಾಲ ಸಹಕಾರ ಸಂಘ(ನಿ)ವು ಬೆಂಗಳೂರು ಮಹಾನಗರದಲ್ಲಿನ ಒಂದು ಪ್ರಮುಖ ನೌಕರರ ಸಾಲ ಸಹಕಾರ ಸಂಘಗಳಲ್ಲಿ ಒಂದಾಗಿದೆ. ಈ ಸಂಘವನ್ನು ಬೆಂಗಳೂರು ವಿಶ್ವವಿದ್ಯಾಲಯದ ನೌಕರರಲ್ಲಿ ಪರಸ್ಪರ ಆರ್ಥಿಕ ಸಹಾಯ, ಮಿತವ್ಯಯ ಹಾಗೂ ಉಳಿತಾಯ ಮನೋಭಾವವನ್ನು ಉತ್ತೇಜಿಸುವ ಹಾಗೂ ನೌಕರರನ್ನು ಖಾಸಗಿ ಲೇವಾದೇವಿಗಾರರ ಹಿಡಿತದಿಂದ ಮುಕ್ತಗೊಳಿಸುವ ಮೂಲ ಉದ್ದೇಶದಿಂದ ಸಂಸ್ಥಾಪನಾ ಅಧ್ಯಕ್ಷರಾದ ಶ್ರೀಯುತ ಜಿ.ಜಿ. ಶಿವಪೂರ್ ರವರ ಪರಿಶ್ರಮ ಹಾಗೂ ಅವರ ಆಶಯದಂತೆ 1974 ರಲ್ಲಿ ಸಹಕಾರ ಸಂಘಗಳ ನಿಬಂಧಕರ ಅಂಗೀಕಾರದ ಮೂಲಕ ಸ್ಥಾಪನೆಯಾಗಿರುತ್ತದೆ.

(ನೋಂದಣಿ ಸಂಖ್ಯೆ A.R.B. 2/B 2, A.R.N . 3028/1975-75 ದಿನಾಂಕ 13-05-1974).

ಪ್ರಾರಂಭದಲ್ಲಿ ಕೇವಲ 166 ಜನ ಸದಸ್ಯರಿಂದ ಪ್ರಾರಂಭವಾದ ಈ ಸಂಘವು ತನ್ನ ಸದಸ್ಯರಿಂದ ಷೇರು ಧನವಾಗಿ ರೂ. 21,920-00 ಗಳು ಹಾಗೂ ನಿಶ್ಚಿತ ಠೇವಣಿಯಾಗಿ ರೂ. 500-00 ಗಳು ಸೇರಿ ದುಡಿಯುವ ಬಂಡವಾಳ ರೂ: 22,420-00 ಹೊಂದಿರುತ್ತದೆ. ಆರಂಭದಲ್ಲಿ ತನ್ನ ಸದಸ್ಯರಿಗೆ ಗರಿಷ್ಠ ರೂ. 500-00 ವರೆಗೆ ಮಾತ್ರ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದ ಸಂಘವು ಇಂದು ಬೇರೆ ಯಾವ ಸಹಕಾರ ಸಂಘಗಳು ನೀಡದ ಜಾಮೀನು ಸಾಲ ಗರಿಷ್ಠ ರೂ. 5 ಲಕ್ಷದ ವರೆಗೆ ನೀಡುವಷ್ಟು ಸದೃಢ ಸಂಸ್ಥೆಯಾಗಿ ಬೆಳೆದಿದೆ.

ಸಂಘವು ಪ್ರಾರಂಭದ ವರ್ಷದಿಂದ ಇಂದಿನವರೆವಿಗೂ ಸತತ ಲಾಭದಲ್ಲಿ ಮುಂದುವರಿಯುತ್ತಿದ್ದು, ಪ್ರತಿ ವರ್ಷವೂ ತನ್ನ ಸದಸ್ಯರಿಗೆ ಇತರೆ ಸಹಕಾರ ಸಂಘಗಳಿಗಿಂತ ಹೆಚ್ಚಿನ ಷೇರು ಲಾಭಾಂಶವನ್ನು (ಡಿವಿಡೆಂಡ್) ನೀಡುತ್ತಾ ಬಂದಿರುತ್ತದೆ. ಸಂಘವು 1999 ರಲ್ಲಿ ತನ್ನ 25 ನೇ ವರ್ಷದ 'ಬೆಳ್ಳಿ ಹಬ್ಬ'ವನ್ನು ಆಚರಿಸಿಕೊಂಡಿರುತ್ತದೆ. ಪ್ರಸ್ತುತ ಈಗ ಸಂಘದಲ್ಲಿ ರೂ. 18.84 ಕೋಟಿ ದುಡಿಯುವ ಬಂಡವಾಳವಿದ್ದು, ಸದಸ್ಯರಿಗೆ ರೂ. 11.21 ಕೋಟಿ ಸಾಲ ನೀಡಿರುತ್ತದೆ. ಸಂಘವು ಆಡಿಟ್ ವರ್ಗೀಕರಣದಲ್ಲಿ ಸತತವಾಗಿ 'ಎ' ಗ್ರೇಡ್ ಪಡೆದುಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

 ಸುದ್ದಿಜಾಲ

2021-2022, Annual Report